೧೨
ದೇವರು ನಮ್ಮ ತಂದೆ
೧-೨ ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ * ಎಫೆ. 4:22:ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ಇಬ್ರಿ. 2:10:ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ 1 ಕೊರಿ. 9:24:ಓಟವನ್ನು ಸಹನೆಯಿಂದ ಓಡೋಣ. § ಲೂಕ 24:26; ಫಿಲಿ. 2:8; ಯೆಶಾ. 53:11:ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ * ಕೀರ್ತ. 22:6,7; 69:19; ಯೆಶಾ. 53:3:ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ಇಬ್ರಿ. 1:3:ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ. ೩ ನೀವು ಮನಗುಂದಿದವರಾಗಿ ಗಲಾ. 6:9:ಬೇಸರಗೊಳ್ಳದಂತೆ § ಮತ್ತಾ 10:24:ಯೇಸುವನ್ನು ಕುರಿತು ಯೋಚಿಸಿರಿ. * ಕೆಲವು ಪ್ರತಿಗಳಲ್ಲಿ, ಪಾಪಿಗಳು ತಮ್ಮ ಸ್ವಂತ ಹಾನಿಗೆ ಮಾಡಿದ ವಿರೋಧವನ್ನು ಎಷ್ಟಾಗಿ ಸಹಿಸಿಕೊಂಡನು ಎಂದು ಬರೆದದೆ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. ೪ ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ. ೫ ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ,
ನನ್ನ ಜ್ಞಾ. 3:11,12; ಯೋಬ 5:17:ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ.
ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
೬ ಏಕೆಂದರೆ ಕೀರ್ತ. 94:12; 119:67,75; ಪ್ರಕ. 3:19:ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ.
ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ.
೭ ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. § ಧರ್ಮೋ. 8:5; 2 ಸಮು. 7:14; ಜ್ಞಾ. 13:24:ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ? ೮ ಎಲ್ಲರೂ ಪಾಲುಗಾರರಬೇಕಾದ * 1 ಪೇತ್ರ. 5:9:ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ. ೯ ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ಅರಣ್ಯ. 16:22:ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಯೆಶಾ. 38:16:ಜೀವಿಸಬೇಕಲ್ಲವೇ? ೧೦ ನಮ್ಮ ಲೌಕಿಕ ತಂದೆಗಳು § ಅಥವಾ, ಕೆಲವು ದಿವಸಗಳ ತನಕ. ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ * 2 ಪೇತ್ರ. 1:4; ಯಾಜ. 11:44:ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ. ೧೧ ಯಾವ ಶಿಕ್ಷೆಯಾದರೂ 1 ಪೇತ್ರ. 1:6:ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ ಯಾಕೋಬ. 3:17,18:ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ. ೧೨ ಆದುದ್ದರಿಂದ § ಯೆಶಾ. 35:3; ಯೋಬ. 4:3,4:ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ. ೧೩  * ಜ್ಞಾ. 4:26,27:ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಕುಂಟುವ ಕಾಲು ಉಳುಕಿ ಹೋಗದೇ ವಾಸಿಯಾಗುವುದು.
ದೇವರ ಕೃಪೆಯನ್ನು ತಿರಸ್ಕರಿಸುವುದರ ಬಗ್ಗೆ ಎಚ್ಚರಿಕೆ
೧೪  ರೋಮಾ. 14:19:ಎಲ್ಲರೊಂದಿಗೆ ಸಮಾಧಾನದಿಂದ ಜೀವಿಸಲು ಮತ್ತು 1 ಥೆಸ. 4:7:ಪರಿಶುದ್ಧರಾಗಿರಲು ಪ್ರಯತ್ನಮಾಡಿರಿ. ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವುದಿಲ್ಲ. ೧೫ ನಿಮ್ಮಲ್ಲಿ ಯಾವನೂ § ಇಬ್ರಿ. 4:1; 2 ಕೊರಿ. 6:1; ಗಲಾ. 5:4:ದೇವರ ಕೃಪೆಯಿಂದ ತಪ್ಪಿ ಹಿಂಜಾರಿ ಹೋಗದಂತೆಯೂ, * ಧರ್ಮೋ. 29:18; ಅ. ಕೃ. 8:23:ಯಾವ ಕಹಿಯಾದ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅನೇಕರನ್ನು ಮಲಿನಪಡಿಸದಂತೆ ನೋಡಿಕೊಳ್ಳಿರಿ. ೧೬ ಯಾವ ಜಾರನಾಗಲಿ, ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆ ವಹಿಸಿಕೊಳ್ಳಿರಿ. ಆದಿ. 25:33:ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು. ೧೭  ಆದಿ. 27:34,36,38.ಅನಂತರದಲ್ಲಿ ತನ್ನ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ, ಪಶ್ಚಾತ್ತಾಪಕ್ಕೆ § ಅಥವಾ. ಮಾನಸಾಂತರಕ್ಕೆ. ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ನೀವು ಬಲ್ಲವರಾಗಿದ್ದೀರಿ.
೧೮-೧೯ ನೀವು * ವಿಮೋ. 19:18; 20:18; ಧರ್ಮೋ. 4:11; 5:22:ಮುಟ್ಟಬಹುದಾದ ಮತ್ತು ಬೆಂಕಿ ಹೊತ್ತಿದಂಥ ಬೆಟ್ಟಕ್ಕೂ, ಕಾರ್ಮೋಡ, ಕಗ್ಗತ್ತಲೆ, ಬಿರುಗಾಳಿ, ವಿಮೋ. 19:16,19:ತುತ್ತೂರಿಯ ಶಬ್ದ, ಮಾತುಗಳ ಧ್ವನಿ ಎಂಬಿವುಗಳ ಬಳಿಗಲ್ಲ ನೀವು ಬಂದಿರುವುದು. ಆ ಧ್ವನಿಯನ್ನು ಕೇಳಿದವರು ಇನ್ನೆಂದಿಗೂ ಆ ಧ್ವನಿ ವಿಮೋ. 20:19; ಧರ್ಮೋ. 5:5,23,25; 18:16: ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ೨೦ ಏಕೆಂದರೆ, § ವಿಮೋ. 19:12,13:ಒಂದು ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ ವಿಧಿಯನ್ನು ಅವರಿಂದ ತಾಳಲಾಗಲಿಲ್ಲ. ೨೧ ಇದಲ್ಲದೆ ಆ ದೃಶ್ಯವು ಅತಿ ಭಯಾನಕವಾಗಿದ್ದದರಿಂದ ಮೋಶೆಯು, * ವಿಮೋ. 19:16; ಧರ್ಮೋ. 9:19:ನಾನು ಹೆದರಿ, ನಡುಗುತ್ತಿದ್ದೇನೆ ಎಂದು ಹೇಳಿದನು.
೨೨ ಆದರೆ ನೀವು ಪ್ರಕ. 14:1:ಚೀಯೋನ್ ಪರ್ವತಕ್ಕೂ, ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಗಲಾ. 4:26:ಪರಲೋಕದ ಯೆರೂಸಲೇಮಿಗೂ, ಉತ್ಸವ ಸಂಘದಲ್ಲಿ ಕೂಡಿರುವ § ಯೂದ. 14:ಕೋಟ್ಯಾನುಕೋಟಿ ದೇವದೂತರ ಬಳಿಗೂ, ೨೩ ಪರಲೋಕದಲ್ಲಿ * ಲೂಕ 10:20:ಹೆಸರು ಬರೆಸಿಕೊಂಡಿರುವ ಇಬ್ರಿ. 2:12:ಚೊಚ್ಚಲ ಮಕ್ಕಳ ಸಭೆಗೂ, ಆದಿ. 18:25; ಕೀರ್ತ. 58:11:ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ, ಪರಿಪೂರ್ಣರಾಗಿರುವ ನೀತಿವಂತರ ಆತ್ಮಗಳ ಬಳಿಗೂ, ೨೪  § ಇಬ್ರಿ. 8:6; 9:15ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ, * ಇಬ್ರಿ. 11:4; ಆದಿ. 4:10:ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ ಇಬ್ರಿ. 10:22:ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ. ೨೫ ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಅರಣ್ಯ. 16:24-35; ಇಬ್ರಿ. 2:3:ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು? ೨೬  § ವಿಮೋ. 19:18:ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, * ಹಗ್ಗಾ. 2:6:ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ ಎಂದು ವಾಗ್ದಾನಮಾಡಿ ಹೇಳಿದ್ದಾನೆ. ೨೭ ಇನ್ನೊಂದೇ ಸಾರಿ, ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. ಕೀರ್ತ. 102:26:ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು. ೨೮ ಆದ್ದರಿಂದ ದಾನಿ. 2:44:ಯಾರೂ ಕದಲಿಸಲಾರದ ರಾಜ್ಯವನ್ನು ಪಡೆದುಕೊಳ್ಳುವವರಾದ ನಾವು § ಅಥವಾ, ದೇವರ ಕೃಪೆಯನ್ನು ಹಿಡಿದುಕೊಂಡು. ಕೃತಜ್ಞತೆಯುಳ್ಳವರಾಗಿ, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಮತ್ತು ಭಯದಿಂದಲೂ ಮಾಡೋಣ. ೨೯ ಏಕೆಂದರೆ * ಧರ್ಮೋ. 4:24; 2 ಥೆಸ. 1:8:ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.

*೧೨:೧-೨ ಎಫೆ. 4:22:

೧೨:೧-೨ ಇಬ್ರಿ. 2:10:

೧೨:೧-೨ 1 ಕೊರಿ. 9:24:

§೧೨:೧-೨ ಲೂಕ 24:26; ಫಿಲಿ. 2:8; ಯೆಶಾ. 53:11:

*೧೨:೧-೨ ಕೀರ್ತ. 22:6,7; 69:19; ಯೆಶಾ. 53:3:

೧೨:೧-೨ ಇಬ್ರಿ. 1:3:

೧೨:೩ ಗಲಾ. 6:9:

§೧೨:೩ ಮತ್ತಾ 10:24:

*೧೨:೩ ಕೆಲವು ಪ್ರತಿಗಳಲ್ಲಿ, ಪಾಪಿಗಳು ತಮ್ಮ ಸ್ವಂತ ಹಾನಿಗೆ ಮಾಡಿದ ವಿರೋಧವನ್ನು ಎಷ್ಟಾಗಿ ಸಹಿಸಿಕೊಂಡನು ಎಂದು ಬರೆದದೆ.

೧೨:೫ ಜ್ಞಾ. 3:11,12; ಯೋಬ 5:17:

೧೨:೬ ಕೀರ್ತ. 94:12; 119:67,75; ಪ್ರಕ. 3:19:

§೧೨:೭ ಧರ್ಮೋ. 8:5; 2 ಸಮು. 7:14; ಜ್ಞಾ. 13:24:

*೧೨:೮ 1 ಪೇತ್ರ. 5:9:

೧೨:೯ ಅರಣ್ಯ. 16:22:

೧೨:೯ ಯೆಶಾ. 38:16:

§೧೨:೧೦ ಅಥವಾ, ಕೆಲವು ದಿವಸಗಳ ತನಕ.

*೧೨:೧೦ 2 ಪೇತ್ರ. 1:4; ಯಾಜ. 11:44:

೧೨:೧೧ 1 ಪೇತ್ರ. 1:6:

೧೨:೧೧ ಯಾಕೋಬ. 3:17,18:

§೧೨:೧೨ ಯೆಶಾ. 35:3; ಯೋಬ. 4:3,4:

*೧೨:೧೩ ಜ್ಞಾ. 4:26,27:

೧೨:೧೪ ರೋಮಾ. 14:19:

೧೨:೧೪ 1 ಥೆಸ. 4:7:

§೧೨:೧೫ ಇಬ್ರಿ. 4:1; 2 ಕೊರಿ. 6:1; ಗಲಾ. 5:4:

*೧೨:೧೫ ಧರ್ಮೋ. 29:18; ಅ. ಕೃ. 8:23:

೧೨:೧೬ ಆದಿ. 25:33:

೧೨:೧೭ ಆದಿ. 27:34,36,38.

§೧೨:೧೭ ಅಥವಾ. ಮಾನಸಾಂತರಕ್ಕೆ.

*೧೨:೧೮-೧೯ ವಿಮೋ. 19:18; 20:18; ಧರ್ಮೋ. 4:11; 5:22:

೧೨:೧೮-೧೯ ವಿಮೋ. 19:16,19:

೧೨:೧೮-೧೯ ವಿಮೋ. 20:19; ಧರ್ಮೋ. 5:5,23,25; 18:16:

§೧೨:೨೦ ವಿಮೋ. 19:12,13:

*೧೨:೨೧ ವಿಮೋ. 19:16; ಧರ್ಮೋ. 9:19:

೧೨:೨೨ ಪ್ರಕ. 14:1:

೧೨:೨೨ ಗಲಾ. 4:26:

§೧೨:೨೨ ಯೂದ. 14:

*೧೨:೨೩ ಲೂಕ 10:20:

೧೨:೨೩ ಇಬ್ರಿ. 2:12:

೧೨:೨೩ ಆದಿ. 18:25; ಕೀರ್ತ. 58:11:

§೧೨:೨೪ ಇಬ್ರಿ. 8:6; 9:15

*೧೨:೨೪ ಇಬ್ರಿ. 11:4; ಆದಿ. 4:10:

೧೨:೨೪ ಇಬ್ರಿ. 10:22:

೧೨:೨೫ ಅರಣ್ಯ. 16:24-35; ಇಬ್ರಿ. 2:3:

§೧೨:೨೬ ವಿಮೋ. 19:18:

*೧೨:೨೬ ಹಗ್ಗಾ. 2:6:

೧೨:೨೭ ಕೀರ್ತ. 102:26:

೧೨:೨೮ ದಾನಿ. 2:44:

§೧೨:೨೮ ಅಥವಾ, ದೇವರ ಕೃಪೆಯನ್ನು ಹಿಡಿದುಕೊಂಡು.

*೧೨:೨೯ ಧರ್ಮೋ. 4:24; 2 ಥೆಸ. 1:8: