೧೦
೧ ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಉತ್ತಮ ಸಂಗತಿಗಳ * ಇಬ್ರಿ. 8:5; ಕೊಲೊ. 2:17:ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲ. ಆದ್ದರಿಂದ ಆ ಧರ್ಮಶಾಸ್ತ್ರವು ಪ್ರತಿ ವರ್ಷವೂ ಯಾವಾಗಲೂ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ, ದೇವರ ಸಮೀಪಕ್ಕೆ ಬರುವವರನ್ನು ಇಬ್ರಿ. 9:9:ಎಂದಿಗೂ ಪರಿಪೂರ್ಣತೆಗೆ ತರಲಾರದು. ೨ ತಂದಿದ್ದ ಪಕ್ಷದಲ್ಲಿ ಯಜ್ಞಗಳ ನಿಂತು ಹೋಗುತ್ತಿದ್ದವು, ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ, ಅವರಿಗೆ ಪಾಪದ ಪ್ರಜ್ಞೆ ಎಂದಿಗೂ ಕಾಡುತ್ತಿರಲಿಲ್ಲ. ೩ ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ ಇಬ್ರಿ. 9:7; ಯಾಜ. 16:21:ಪಾಪಗಳ ಜ್ಞಾಪಕವಾಗುವುದುಂಟು, ೪ ಯಾಕೆಂದರೆ § ವ. 11. ಯೆಶಾ. 1:11-15; ಮೀಕ. 6:6-8:ಹೋರಿಗಳ ಮತ್ತು ಕುರಿಗಳ ರಕ್ತದಿಂದ ಪಾಪಗಳನ್ನು ಪರಿಹಾರಮಾಡುವುದು ಅಸಾಧ್ಯವಾಗಿದೆ. ೫ ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ,
* ಕೀರ್ತ. 40. 6-8 [ದೇವರೇ,] ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ,
ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ,
೬ ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ.
೭ ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ
ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ ಎಂದು ಹೇಳಿದೆನು.
೮ ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ ಎಂದು ಹೇಳಿದ್ದಾನೆ. ೯ ತರುವಾಯ ಆತನು ವ. 7:ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ. ೧೦ ಯೇಸು ಕ್ರಿಸ್ತನು ಇಬ್ರಿ. 7:27; 9:12:ಒಂದೇ ಸಾರಿ § ಮತ್ತಾ 26:26; ಮಾರ್ಕ 14:22; ಲೂಕ 22:19; 1 ಕೊರಿ. 11:24:ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ * ಇಬ್ರಿ. 10:5; 2:11; 13:12:ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು.
೧೧ ಇದಲ್ಲದೆ ಪ್ರತಿಯೊಬ್ಬ ಯಾಜಕನು ಅರಣ್ಯ. 28:3:ಪ್ರತಿದಿನ ಸೇವೆಮಾಡುತ್ತಾ, ಇಬ್ರಿ. 9:9; 10:1, 4:ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು. ೧೨ ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ § ಇಬ್ರಿ. 1:3; ಮಾರ್ಕ 16:19:ದೇವರ ಬಲಗಡೆಯಲ್ಲಿ ಕುಳಿತುಕೊಂಡನು. ೧೩  * ಕೀರ್ತ. 110:1; ಇಬ್ರಿ. 1:13. 1 ಕೊರಿ. 15:25-28:ಅಂದಿನಿಂದ ತನ್ನ ವಿರೋಧಿಗಳನ್ನು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು. ೧೪ ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ವ. 1:ಪರಿಪೂರ್ಣರನ್ನಾಗಿ ಮಾಡಿದ್ದಾನೆ.
೧೫ ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ,
೧೬  ಯೆರೆಮೀಯನು 31:33; ಇಬ್ರಿ. 8:10; ರೋಮಾ. 11:27:ಆ ದಿನಗಳು ಬಂದ ಮೇಲೆ
ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,
ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು,
ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.
ಎಂಬುದಾಗಿ ಹೇಳಿದ ತರುವಾಯ ಇನ್ನು, ೧೭  § ಯೆರೆಮೀಯನು 31:34; ಇಬ್ರಿ. 8:12:ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ. ಎಂದು ಹೇಳುತ್ತಾನೆ. ೧೮ ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ.
ಯೇಸುವಿನ ಮೂಲಕ ದೇವಸನ್ನಿಧಾನವನ್ನು ಯೋಗ್ಯರಾಗಿ ಸೇರೋಣ
೧೯-೨೦  * ಇಬ್ರಿ. 9:8; ಯೋಹಾ. 10:9; 14:6.ಹೀಗಿರುವಲ್ಲಿ ಸಹೋದರರೇ, ಯೇಸು ತನ್ನ ರಕ್ತದಿಂದ ಇಬ್ರಿ. 9:3:ಆತನ ದೇಹವೆಂಬ ಪರದೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾನೆ. ಅದರ ಮೂಲಕ ಅತಿ ಇಬ್ರಿ. 4:16:ಪರಿಶುದ್ಧ ಸ್ಥಳವನ್ನು ಪ್ರವೇಶಿಸಲು ನಮಗೆ ಭರವಸೆ ದೊರೆತಿದೆ. ೨೧ ಮತ್ತು § ಜೆಕ. 6:11-13; ಇಬ್ರಿ. 2:17; 4:14:ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ. ೨೨ ಆದಕಾರಣ ಕೆಟ್ಟ ಮನಸ್ಸಾಕ್ಷಿಯನ್ನು ಪ್ರೋಕ್ಷಿಸಿ ಶುದ್ಧಿಕರಿಸಿಕೊಂಡು, * ಇಬ್ರಿ. 9:14:ತಿಳಿನೀರಿನಿಂದ ತೊಳೆದ ದೇಹದಿಂದಲೂ, ಯೆಹೆ. 36:25; ಇಬ್ರಿ. 12:24. 2 ಕೊರಿ. 7:1; 1 ಪೇತ್ರ 1:2:ಯಥಾರ್ಥಹೃದಯದಿಂದಲೂ, ನಂಬಿಕೆಯ ಪೂರ್ಣನಿಶ್ಚಯದಿಂದಲೂ ದೇವರ ಸಮೀಪಕ್ಕೆ ಬರೋಣ. ೨೩ ನಾವು ನಮ್ಮ ನಿರೀಕ್ಷೆಯನ್ನು ಕುರಿತು ಮಾಡಿದ ಇಬ್ರಿ. 4:14:ಅರಿಕೆಯನ್ನು ನಿಶ್ಚಂಚಲದಿಂದ ಬಿಗಿಯಾಗಿ ಹಿಡಿಯೋಣ, ಯಾಕೆಂದರೆ § ಇಬ್ರಿ. 11:11; 1 ಕೊರಿ. 1:9:ವಾಗ್ದಾನ ಮಾಡಿದಾತನು ನಂಬಿಗಸ್ತನು. ೨೪ ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ * ಇಬ್ರಿ. 3:13:ಒಬ್ಬರನ್ನೊಬ್ಬರು ಹುರಿದುಂಬಿಸೋಣ. ೨೫  ಅ. ಕೃ. 2:42:ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ರೋಮಾ. 13:11-13; ಯಾಕೋಬ 5:8:ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.
೨೬ ನಾವು § ಇಬ್ರಿ. 6:4; 2 ಪೇತ್ರ. 2:20, 21:ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೂ * ಅರಣ್ಯ. 15:30; ಧರ್ಮೋ. 17:12:ಬೇಕೆಂದು ಪಾಪಮಾಡಿದರೆ ಇಬ್ರಿ. 6:6; 1 ಯೋಹಾ. 5:16:ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ. ೨೭ ಬದಲಿಗೆ, ಅತ್ಯಂತ ಇಬ್ರಿ. 2:3; 12:25:ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ § ಯೆಶಾ. 26:11; ಚೆಫ. 1:18; 3:8. 2 ಥೆಸ. 1:8:ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು. ೨೮  * ಧರ್ಮೋ. 17:2-6:ಮೋಶೆಯ ಧರ್ಮಶಾಸ್ತ್ರವನ್ನು ತಿರಸ್ಕಾರ ಮಾಡಿದವನಿಗೆ ಅರಣ್ಯ. 35:30. ಇಬ್ಬರ ಇಲ್ಲವೆ ಮೂವರ ಸಾಕ್ಷ್ಯಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆ ಆಗುತ್ತಿತಷ್ಟೆ. ೨೯ ಹೀಗಿರುವಲ್ಲಿ, ಇಬ್ರಿ. 6:6:ದೇವಕುಮಾರನನ್ನು ತುಳಿದು, § ಇಬ್ರಿ. 9:13, 14:ತನ್ನನ್ನು ಶುದ್ಧೀಕರಿಸಿದ * ಇಬ್ರಿ. 13:20; ಜೆಕ. 9:11:ಒಡಂಬಡಿಕೆಯ ರಕ್ತವನ್ನು ಮೂಲ. ಸಾಧಾರಣವೆಂದೆಣಿಸಿ. ಅಶುದ್ಧವೆಂದೆಣಿಸಿ, ಮೂಲ. ಕೃಪೆಯ ಆತ್ಮನನ್ನು. ದೇವರ ಕೃಪಾವರವಾಗಿರುವ ಆತ್ಮನನ್ನು § ಮತ್ತಾ 12:31, 32; ಎಫೆ. 4:30. ತಿರಸ್ಕರಿಸುವವನೋ, ಇನೆಂಥಾ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ? ೩೦  * ಧರ್ಮೋ. 32:35; ರೋಮಾ. 12:19:ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು ಹೇಳಿದಾತನನ್ನು ಬಲ್ಲೆವು. ಇದಲ್ಲದೆ ಧರ್ಮೋ. 32:36; ಕೀರ್ತ. 50. 4:ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು ಎಂದು ಹೇಳಿಯದೆ. ೩೧  ಯೆಶಾ. 33:14; ಲೂಕ 12:5:ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಎಷ್ಟೋ ಭಯಂಕರವಾದದ್ದು.
೩೨ ಹೀಗಿರಲಾಗಿ § ಇಬ್ರಿ. 6:4:ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ * ಫಿಲಿ. 1:30. ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. ೩೩ ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ 1 ಕೊರಿ. 4:9:ಹಾಸ್ಯಕ್ಕೆ ಗುರಿಯಾದಿರಿ. ಇಬ್ರಿ. 13:3; ಮತ್ತಾ 25:36; 2 ತಿಮೊ. 1:16:ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ. ೩೪ ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ § 1 ಪೇತ್ರ. 1:14:ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ * ಮತ್ತಾ 5:12:ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ. ೩೫ ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಇಬ್ರಿ. 2:2; 11:26:ಮಹಾ ಪ್ರತಿಫಲ ಉಂಟು. ೩೬ ನೀವು ಇಬ್ರಿ. 13:21:ದೇವರ ಚಿತ್ತವನ್ನು ನೆರವೇರಿಸಿದ ಮೇಲೆ § ಇಬ್ರಿ. 11:39:ವಾಗ್ದಾನವನ್ನು ಹೊಂದಬೇಕಾದರೆ * ಇಬ್ರಿ. 12:1-7; ಲೂಕ. 21:19; ರೋಮಾ. 2:7; 12:12; ಮತ್ತಾ 10:22:ನಿಮಗೆ ತಾಳ್ಮೆಯು ಅವಶ್ಯವಾಗಿದೆ.
೩೭  ಹಬ. 2:3, 4:ಬರುವಾತನು ಹಗ್ಗಾ. 2:6; ಲೂಕ. 18:8:ಇನ್ನು ಸ್ವಲ್ಪ ಕಾಲದಲ್ಲಿ
ಬರುವನು ತಡಮಾಡುವುದಿಲ್ಲ.
೩೮ ಆದರೆ ನನ್ನವನಾಗಿರುವ § ರೋಮಾ. 1:17; ಗಲಾ. 3:11:ನೀತಿವಂತನು ನಂಬಿಕೆಯಿಂದಲೇ ಬದುಕುವನು,
ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.
೩೯ ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ.

*೧೦:೧ ಇಬ್ರಿ. 8:5; ಕೊಲೊ. 2:17:

೧೦:೧ ಇಬ್ರಿ. 9:9:

೧೦:೩ ಇಬ್ರಿ. 9:7; ಯಾಜ. 16:21:

§೧೦:೪ ವ. 11. ಯೆಶಾ. 1:11-15; ಮೀಕ. 6:6-8:

*೧೦:೫ ಕೀರ್ತ. 40. 6-8

೧೦:೯ ವ. 7:

೧೦:೧೦ ಇಬ್ರಿ. 7:27; 9:12:

§೧೦:೧೦ ಮತ್ತಾ 26:26; ಮಾರ್ಕ 14:22; ಲೂಕ 22:19; 1 ಕೊರಿ. 11:24:

*೧೦:೧೦ ಇಬ್ರಿ. 10:5; 2:11; 13:12:

೧೦:೧೧ ಅರಣ್ಯ. 28:3:

೧೦:೧೧ ಇಬ್ರಿ. 9:9; 10:1, 4:

§೧೦:೧೨ ಇಬ್ರಿ. 1:3; ಮಾರ್ಕ 16:19:

*೧೦:೧೩ ಕೀರ್ತ. 110:1; ಇಬ್ರಿ. 1:13. 1 ಕೊರಿ. 15:25-28:

೧೦:೧೪ ವ. 1:

೧೦:೧೬ ಯೆರೆಮೀಯನು 31:33; ಇಬ್ರಿ. 8:10; ರೋಮಾ. 11:27:

§೧೦:೧೭ ಯೆರೆಮೀಯನು 31:34; ಇಬ್ರಿ. 8:12:

*೧೦:೧೯-೨೦ ಇಬ್ರಿ. 9:8; ಯೋಹಾ. 10:9; 14:6.

೧೦:೧೯-೨೦ ಇಬ್ರಿ. 9:3:

೧೦:೧೯-೨೦ ಇಬ್ರಿ. 4:16:

§೧೦:೨೧ ಜೆಕ. 6:11-13; ಇಬ್ರಿ. 2:17; 4:14:

*೧೦:೨೨ ಇಬ್ರಿ. 9:14:

೧೦:೨೨ ಯೆಹೆ. 36:25; ಇಬ್ರಿ. 12:24. 2 ಕೊರಿ. 7:1; 1 ಪೇತ್ರ 1:2:

೧೦:೨೩ ಇಬ್ರಿ. 4:14:

§೧೦:೨೩ ಇಬ್ರಿ. 11:11; 1 ಕೊರಿ. 1:9:

*೧೦:೨೪ ಇಬ್ರಿ. 3:13:

೧೦:೨೫ ಅ. ಕೃ. 2:42:

೧೦:೨೫ ರೋಮಾ. 13:11-13; ಯಾಕೋಬ 5:8:

§೧೦:೨೬ ಇಬ್ರಿ. 6:4; 2 ಪೇತ್ರ. 2:20, 21:

*೧೦:೨೬ ಅರಣ್ಯ. 15:30; ಧರ್ಮೋ. 17:12:

೧೦:೨೬ ಇಬ್ರಿ. 6:6; 1 ಯೋಹಾ. 5:16:

೧೦:೨೭ ಇಬ್ರಿ. 2:3; 12:25:

§೧೦:೨೭ ಯೆಶಾ. 26:11; ಚೆಫ. 1:18; 3:8. 2 ಥೆಸ. 1:8:

*೧೦:೨೮ ಧರ್ಮೋ. 17:2-6:

೧೦:೨೮ ಅರಣ್ಯ. 35:30.

೧೦:೨೯ ಇಬ್ರಿ. 6:6:

§೧೦:೨೯ ಇಬ್ರಿ. 9:13, 14:

*೧೦:೨೯ ಇಬ್ರಿ. 13:20; ಜೆಕ. 9:11:

೧೦:೨೯ ಮೂಲ. ಸಾಧಾರಣವೆಂದೆಣಿಸಿ.

೧೦:೨೯ ಮೂಲ. ಕೃಪೆಯ ಆತ್ಮನನ್ನು.

§೧೦:೨೯ ಮತ್ತಾ 12:31, 32; ಎಫೆ. 4:30.

*೧೦:೩೦ ಧರ್ಮೋ. 32:35; ರೋಮಾ. 12:19:

೧೦:೩೦ ಧರ್ಮೋ. 32:36; ಕೀರ್ತ. 50. 4:

೧೦:೩೧ ಯೆಶಾ. 33:14; ಲೂಕ 12:5:

§೧೦:೩೨ ಇಬ್ರಿ. 6:4:

*೧೦:೩೨ ಫಿಲಿ. 1:30.

೧೦:೩೩ 1 ಕೊರಿ. 4:9:

೧೦:೩೩ ಇಬ್ರಿ. 13:3; ಮತ್ತಾ 25:36; 2 ತಿಮೊ. 1:16:

§೧೦:೩೪ 1 ಪೇತ್ರ. 1:14:

*೧೦:೩೪ ಮತ್ತಾ 5:12:

೧೦:೩೫ ಇಬ್ರಿ. 2:2; 11:26:

೧೦:೩೬ ಇಬ್ರಿ. 13:21:

§೧೦:೩೬ ಇಬ್ರಿ. 11:39:

*೧೦:೩೬ ಇಬ್ರಿ. 12:1-7; ಲೂಕ. 21:19; ರೋಮಾ. 2:7; 12:12; ಮತ್ತಾ 10:22:

೧೦:೩೭ ಹಬ. 2:3, 4:

೧೦:೩೭ ಹಗ್ಗಾ. 2:6; ಲೂಕ. 18:8:

§೧೦:೩೮ ರೋಮಾ. 1:17; ಗಲಾ. 3:11: