೮
ಯೇಸುವಿನ ಯಾಜಕತ್ವವು ಶಾಶ್ವತವಾದದ್ದು
೧ ನಾವು ಈಗ ಹೇಳುವ ಸಂಗತಿಗಳಲ್ಲಿ * ಅಥವಾ, ಮಾತೇನಂದರೆ, ಇಂಥ ಮಹಾಯಾಜಕನೇ ನಮಗಿದ್ದಾನೆ; ಈತನು ಪರಲೋಕದೊಳಗೆ ಬಲಪಾರ್ಶ್ವದಲ್ಲಿ ಕುಳಿತಿದ್ದು ಪವಿತ್ರಸ್ಥಾನದಲ್ಲಿ. ಮುಖ್ಯವಾದ ಮಾತೇನೆಂದರೆ, ಪರಲೋಕದೊಳಗೆ † ಮಾರ್ಕ. 16:19:ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ. ೨ ಆತನು ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ‡ ಇಬ್ರಿ. 9:11, 24:ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.
೩ § ಇಬ್ರಿ. 5:1:ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ, ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ * ಇಬ್ರಿ. 9:12-14; 10:9-12; ಎಫೆ. 5:2:ಸಮರ್ಪಿಸುವುದಕ್ಕೆ ಈತನಿಗೂ ಸಹ ಏನಾದರೂ ಇರುವುದು ಅಗತ್ಯವಾಗಿದೆ. ೪ ಆತನು ಇನ್ನೂ ಭೂಮಿಯ ಮೇಲೆ ಇದ್ದಿದ್ದರೆ ಯಾಜಕನಾಗುತ್ತಿರಲಿಲ್ಲ. ಯಾಕೆಂದರೆ ಧರ್ಮಶಾಸ್ತ್ರದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ. ೫ ಮೋಶೆಯು ಗುಡಾರವನ್ನು ಕಟ್ಟುವುದಕ್ಕಿದ್ದಾಗ, ನೋಡು, ನಾನು † ವಿಮೋ. 25:40. ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು ಎಂದು ದೇವರಿಂದ ಎಚ್ಚರಿಸಲ್ಪಟ್ಟಂತೆಯೇ ಪರಲೋಕದಲ್ಲಿರುವವುಗಳ ‡ ಇಬ್ರಿ. 9:23:ಪ್ರತಿರೂಪವೂ, § ಇಬ್ರಿ. 10:1; ಕೊಲೊ. 2:17:ಛಾಯೆಯೂ ಆಗಿರುವ ಆಲಯದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ೬ ಆದರೆ ಯೇಸು ಕ್ರಿಸ್ತನು ಅದಕ್ಕಿಂತ * ಇಬ್ರಿ. 1:4; 2 ಕೊರಿ. 3:6-11:ಶ್ರೇಷ್ಠವಾದ ಉತ್ತಮ ಸೇವೆಯನ್ನು ಹೊಂದಿದವನಾಗಿದ್ದಾನೆ, ಯಾಕೆಂದರೆ ಈತನು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ † ಇಬ್ರಿ. 7:22:ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.
೭ ‡ ಇಬ್ರಿ. 7:11:ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅಗತ್ಯವಿರುತ್ತಿರಲಿಲ್ಲ. ೮ ಆದರೆ ದೇವರು ಆ ಜನರಲ್ಲಿ ತಪ್ಪು ಹೊರಿಸಿ ಹೀಗೆಂದನು,
§ ಯೆರೆಮೀಯನು 31:31-34: ‘ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ
ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು’ ಎಂದು ಕರ್ತನು ಹೇಳುತ್ತಾನೆ.
೯ ‘ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತ ದೇಶದೊಳಗಿನಿಂದ ಕರೆದುಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಹಾಗಲ್ಲ.
ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ’ ಎಂದು ಕರ್ತನು ಹೇಳುತ್ತಾನೆ.
೧೦ * ಇಬ್ರಿ. 10:16; ರೋಮಾ. 11:27:‘ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು’ ಹೀಗಿರುವುದು,
‘ನಾನು ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು.
ನಾನು † 2 ಕೊರಿ. 3:3:ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು.
ನಾನು ಅವರಿಗೆ ದೇವರಾಗಿರುವೆನು.
ಅವರು ನನ್ನ ಜನರಾಗಿರುವರು.
೧೧ ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ
ಕರ್ತನನ್ನು ತಿಳಿದುಕೊಳ್ಳಿರಿ ಎಂದು ಬೋಧಿಸಬೇಕಾಗಿರುವುದಿಲ್ಲ.
ಏಕೆಂದರೆ ‡ ಯೆಶಾ. 54:13; ಯೋಹಾ 6:45; 1 ಯೋಹಾ. 2:27:ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.
೧೨ ನಾನು ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು
ಮತ್ತು § ಇಬ್ರಿ. 10:17; ರೋಮಾ. 11:27:ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ’ ಎಂದು ಕರ್ತನು ನುಡಿಯುತ್ತಾನೆ.
೧೩ ಆತನು ಹೊಸತು ಎಂದು ಹೇಳಿದ್ದರಲ್ಲಿ ಮೊದಲಿದ್ದ ಒಡಂಬಡಿಕೆಯನ್ನು * 2 ಕೊರಿ. 5:17:ಹಳೆಯದಾಗಿ ಮಾಡಿದ್ದಾನೆ. ಅದು ಹಳೆಯದಾಗುತ್ತಾ ಅಳಿದುಹೋಗುವುದಕ್ಕೆ ಸಮೀಪವಾಗಿದೆ.
*೮:೧ ಅಥವಾ, ಮಾತೇನಂದರೆ, ಇಂಥ ಮಹಾಯಾಜಕನೇ ನಮಗಿದ್ದಾನೆ; ಈತನು ಪರಲೋಕದೊಳಗೆ ಬಲಪಾರ್ಶ್ವದಲ್ಲಿ ಕುಳಿತಿದ್ದು ಪವಿತ್ರಸ್ಥಾನದಲ್ಲಿ.
‡೮:೨ ಇಬ್ರಿ. 9:11, 24:
§೮:೩ ಇಬ್ರಿ. 5:1:
*೮:೩ ಇಬ್ರಿ. 9:12-14; 10:9-12; ಎಫೆ. 5:2:
‡೮:೫ ಇಬ್ರಿ. 9:23:
§೮:೫ ಇಬ್ರಿ. 10:1; ಕೊಲೊ. 2:17:
*೮:೬ ಇಬ್ರಿ. 1:4; 2 ಕೊರಿ. 3:6-11:
†೮:೬ ಇಬ್ರಿ. 7:22:
‡೮:೭ ಇಬ್ರಿ. 7:11:
*೮:೧೦ ಇಬ್ರಿ. 10:16; ರೋಮಾ. 11:27:
‡೮:೧೧ ಯೆಶಾ. 54:13; ಯೋಹಾ 6:45; 1 ಯೋಹಾ. 2:27:
§೮:೧೨ ಇಬ್ರಿ. 10:17; ರೋಮಾ. 11:27: